ಗಾನವಿ ಗಲಾಟೆಯಿಂದ ಬಿಗ್ ಬಾಸ್ ಮನೆ ಮಂದಿ ರೋಸಿ ಹೋದರು

Ganavi and Manja arguing inside Bigg Boss Kannada house

ಬಿಗ್ ಬಾಸ್ ಕನ್ನಡ ಸೀಸನ್ ೧೩ರಲ್ಲಿ ವೈಲ್ಡ್ ಕಾರ್ಡ್ ಎಂಟ್ರಿ ಕೊಟ್ಟ ಗಾನವಿ, ತಮ್ಮ ಜಗಳಗಂಟ ಸ್ವಭಾವದಿಂದ ಮನೆಯ ಸದಸ್ಯರನ್ನು ರೋಸಿ ಹೋಗುವಂತೆ ಮಾಡಿದ್ದಾರೆ. ಈ ಹಿಂದೆ ಮಂಜನ ಹಾವಳಿಗೆ ಬೇಸತ್ತಿದ್ದ ಮನೆಯವರಿಗೆ, ಈಗ ಗಾನವಿ ಹೊಸ ತಲೆನೋವಾಗಿ ಪರಿಣಮಿಸಿದ್ದಾರೆ. ಇಬ್ಬರ ಅತಿಯಾದ ವಾಗ್ವಾದದಿಂದಾಗಿ, ಶುಕ್ರವಾರದ ಎಪಿಸೋಡ್ನಲ್ಲಿ ಗಾನವಿ ಮತ್ತು ಮಂಜ ಇಬ್ಬರನ್ನೂ ಜೈಲಿಗೆ ಕಳುಹಿಸಲಾಯಿತು.

ಸೀಸನ್ ಆರಂಭವಾದ ಮೊದಲ ವಾರಗಳಿಂದಲೂ ಮಂಜನ ರೌದ್ರಾವತಾರ ಮನೆ ಮಂದಿಗೆ ಹೊಸತಾಗಿರಲಿಲ್ಲ. ಕಾಲು ಕೆರೆದುಕೊಂಡು ಜಗಳ ಮಾಡುವುದು, ಅನ್ಯರ ವಿಷಯದಲ್ಲಿ ಮೂಗು ತೂರಿಸುವುದು, ವೈಯಕ್ತಿಕ ದಾಳಿ ನಡೆಸುವುದು ಮಂಜನಿಗೆ ಸಾಮಾನ್ಯ ಸಂಗತಿಯಾಗಿತ್ತು. ಆದರೆ, ನಿರೂಪಕ ಸುದೀಪ್ ಅವರ ಖಡಕ್ ಎಚ್ಚರಿಕೆಯ ನಂತರ ಮಂಜ ತುಸು ಮೃದುವಾಗಿದ್ದ. ಮಂಜನ ಬಾಯ್ಬಡುಕತನಕ್ಕೆ ಪೈಪೋಟಿ ನೀಡಲೆಂದೇ ಗಾನವಿ ವೈಲ್ಡ್ ಕಾರ್ಡ್ ಮೂಲಕ ಬಿಗ್ ಬಾಸ್ ಮನೆಗೆ ಪ್ರವೇಶಿಸಿದರು. ಮೊದಲ ದಿನ ತುಸು ಗಾಂಭೀರ್ಯದಿಂದ ಕಂಡ ಗಾನವಿ, ನಂತರ ತಮ್ಮ ನಿಜವಾದ ಮುಖವನ್ನು ಅನಾವರಣಗೊಳಿಸಿದರು. ಅವರ ನಾಲಿಗೆ ಹರಿಬಿಡುವ ರೀತಿ ಎಷ್ಟರ ಮಟ್ಟಿಗೆ ಇತ್ತೆಂದರೆ, ಗಾನವಿ ಎದುರು ಮಂಜ 'ಸಭ್ಯ'ನಂತೆ ಕಾಣುವಂತಾಯಿತು.

ಗಾನವಿ ಗಲಾಟೆಯಿಂದ ಬೇಸತ್ತ ಮನೆ ಮಂದಿ

ಶುಕ್ರವಾರದ ಎಪಿಸೋಡ್ನಲ್ಲಿ ಮನೆ ಮಂದಿ ಕಳಪೆ ಪ್ರದರ್ಶನ ನೀಡಿದವರನ್ನು ಆಯ್ಕೆ ಮಾಡಬೇಕಿತ್ತು. ಕ್ಯಾಪ್ಟೆನ್ಸಿ ಓಟುಗಳ ನಿರ್ವಹಣೆಯಲ್ಲಿ ಮಂಜ ಮತ್ತು ಲಿಖಿತ್ ಮಾಡಿದ ತಪ್ಪಿನಿಂದಾಗಿ, ಸಹಜವಾಗಿಯೇ ಹಲವರು ಮಂಜನ ಹೆಸರನ್ನು ಕಳಪೆಗೆ ಸೂಚಿಸಿದರು. ಇದರ ಜೊತೆಗೆ, ಯಶಸ್, ಗಗನ್, ಶಾಸ್ತ್ರಿ ಸೇರಿದಂತೆ ಹಲವರು ಗಾನವಿಯ ಹೆಸರನ್ನೂ ಕಳಪೆಗೆ ಸೂಚಿಸಿದರು. ತಮ್ಮ ಹೆಸರನ್ನು ತೆಗೆದುಕೊಂಡವರ ವಿರುದ್ಧ ಗಾನವಿ ಜೋರು ದನಿಯಲ್ಲಿ ವಾಗ್ವಾದಕ್ಕಿಳಿದರು. ಕಾರಣಗಳನ್ನು ನೀಡಿದರೂ ಗಾನವಿ ತಮ್ಮ ವಿತಂಡ ವಾದವನ್ನು ಬಿಡಲಿಲ್ಲ. ಶಾಸ್ತ್ರಿಗೆ ಹೇಳಿದ ಮಾತುಗಳು ಇಡೀ ಮನೆ ಮಂದಿಯನ್ನು ಗಾನವಿಯ ವಿರುದ್ಧ ತಿರುಗಿ ಬೀಳುವಂತೆ ಮಾಡಿದವು.

ಜೈಲು ಪಾಲಾದ ಗಾನವಿ ಮತ್ತು ಮಂಜ

ಸ್ಪರ್ಧಿಗಳು ಗಾನವಿಯ ಹೆಸರು ಹೇಳಿದಾಗಲೆಲ್ಲ ಇತರೆ ಸ್ಪರ್ಧಿಗಳು ಚಪ್ಪಾಳೆ ತಟ್ಟಲು ಆರಂಭಿಸಿದರು. ಒಂದೇ ವಾರದಲ್ಲಿ ಗಾನವಿಯ ವರ್ತನೆಯಿಂದ ಮನೆಯ ಸದಸ್ಯರು ಅಷ್ಟು ರೋಸಿ ಹೋಗಿದ್ದಾರೆ ಎಂಬುದಕ್ಕೆ ಇದು ಸಾಕ್ಷಿ. ಜಗಳವಾಡುವುದು ಬಿಗ್ ಬಾಸ್ ಮನೆಯ ಮೂಲ ನಿಯಮ ಎಂದುಕೊಂಡೇ ಗಾನವಿ ಮನೆಗೆ ಪ್ರವೇಶಿಸಿದ್ದಾರೆ ಎನಿಸುತ್ತದೆ. ಮಂಜ ಮತ್ತು ಗಾನವಿ ಇಬ್ಬರೂ ಸಮಾನ ಸಂಖ್ಯೆಯ ಕಳಪೆ ಮತಗಳನ್ನು ಪಡೆದ ಕಾರಣ, ಇಬ್ಬರನ್ನೂ ಜೈಲಿಗೆ ಕಳುಹಿಸಲಾಯಿತು. ಇಷ್ಟು ದಿನ ಮಂಜನ ಅನವಶ್ಯಕ ವಾಗ್ವಾದ ಮತ್ತು ಚುಚ್ಚುಮಾತುಗಳಿಂದ ತಲೆ ಚಿಟ್ಟು ಹಿಡಿಸಿಕೊಂಡಿದ್ದ ಪ್ರೇಕ್ಷಕರಿಗೆ ಈಗ ಗಾನವಿ ಸಹ ಸೇರಿಕೊಂಡಿದ್ದಾರೆ.

ಮುಂದೇನು?

ಇನ್ನು ಮುಂದೆ ಯಾರು ಹೆಚ್ಚು ಅರ್ಥಹೀನ ಜಗಳಗಳನ್ನು ಆಡುತ್ತಾರೆ ಎಂಬ ಸ್ಪರ್ಧೆ ಇಬ್ಬರ ನಡುವೆ ನಡೆಯುವ ಸಾಧ್ಯತೆ ಇದೆ. ಮುಂಬರುವ ವಾರಗಳಲ್ಲಿ ಮನೆಯ ಸದಸ್ಯರು ಗಾನವಿಯ ವರ್ತನೆಯನ್ನು ಹೇಗೆ ಸಹಿಸಿಕೊಳ್ಳುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.

ಸಾಮಾನ್ಯ ಪ್ರಶ್ನೆಗಳು (FAQ)

ಬಿಗ್ ಬಾಸ್ ಮನೆಯಲ್ಲಿ ಗಾನವಿ ಏಕೆ ವಿವಾದ ಸೃಷ್ಟಿಸಿದರು?

ಗಾನವಿ ವೈಲ್ಡ್ ಕಾರ್ಡ್ ಮೂಲಕ ಬಿಗ್ ಬಾಸ್ ಮನೆಗೆ ಪ್ರವೇಶಿಸಿದ ನಂತರ, ತಮ್ಮ ಜಗಳಗಂಟ ಸ್ವಭಾವ ಮತ್ತು ಅನಗತ್ಯ ವಾಗ್ವಾದಗಳಿಂದ ಮನೆಯ ಸದಸ್ಯರನ್ನು ಕೆರಳಿಸಿದರು. ಕಳಪೆ ಆಯ್ಕೆ ಪ್ರಕ್ರಿಯೆಯಲ್ಲಿ ತಮ್ಮ ಹೆಸರು ಬಂದಾಗ ಅವರು ತೀವ್ರವಾಗಿ ಪ್ರತಿಕ್ರಿಯಿಸಿದ್ದರು.

ಮಂಜ ಮತ್ತು ಗಾನವಿ ಇಬ್ಬರೂ ಜೈಲಿಗೆ ಹೋಗಲು ಕಾರಣವೇನು?

ಶುಕ್ರವಾರದ ಎಪಿಸೋಡ್ನಲ್ಲಿ ಮನೆಯ ಸದಸ್ಯರು ಕಳಪೆ ಪ್ರದರ್ಶನ ನೀಡಿದವರನ್ನು ಆಯ್ಕೆ ಮಾಡಬೇಕಿತ್ತು. ಮಂಜ ಮತ್ತು ಗಾನವಿ ಇಬ್ಬರೂ ಸಮಾನ ಸಂಖ್ಯೆಯ ಕಳಪೆ ಮತಗಳನ್ನು ಪಡೆದ ಕಾರಣ, ಬಿಗ್ ಬಾಸ್ ನಿಯಮದಂತೆ ಇಬ್ಬರನ್ನೂ ಜೈಲಿಗೆ ಕಳುಹಿಸಲಾಯಿತು.

ಬಿಗ್ ಬಾಸ್ ಕನ್ನಡ ಸೀಸನ್ ೧೩ರಲ್ಲಿ ಮಂಜನ ವರ್ತನೆ ಹೇಗಿತ್ತು?

ಸೀಸನ್ನ ಆರಂಭದಲ್ಲಿ ಮಂಜ ಬಹಳ ರೌದ್ರಾವತಾರ ತಾಳಿದ್ದರು. ಜಗಳ ಮಾಡುವುದು, ಇನ್ನೊಬ್ಬರ ವಿಷಯದಲ್ಲಿ ಮೂಗು ತೂರಿಸುವುದು ಮತ್ತು ವೈಯಕ್ತಿಕ ದಾಳಿ ಮಾಡುವುದು ಅವರ ಸಾಮಾನ್ಯ ವರ್ತನೆಯಾಗಿತ್ತು. ಆದರೆ, ಸುದೀಪ್ ಅವರ ಎಚ್ಚರಿಕೆಯ ನಂತರ ಅವರು ತುಸು ಮೃದುವಾಗಿದ್ದರು.

Post a Comment

0 Comments