ಇಂದು ಡಿ.ಕೆ. ಶಿವಕುಮಾರ್ ರವರನ್ನು ಜಿ.ಬಿ.ಎ. ಕೇಂದ್ರ ಕಚೇರಿಯಲ್ಲಿ ಭೇಟಿ ಮಾಡಿದ ಬೆಂಗಳೂರು ನಗರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಪದಾಧಿಕಾರಿಗಳು, 5 ಮಹಾನಗರ ಪಾಲಿಕೆಗಳ ವ್ಯಾಪ್ತಿಯಲ್ಲಿ ಪ್ರಕಟವಾಗುತ್ತಿರುವ ನಿಯತಕಾಲಿಕ ಪತ್ರಿಕೆಗಳಿಗೆ ಪ್ರೋತ್ಸಾಹ ಜಾಹೀರಾತು ನೀಡುವಂತೆ ಮನವಿ ಸಲ್ಲಿಸಿದರು. ಜೊತೆಗೆ ಪತ್ರಕರ್ತರ ಆರೋಗ್ಯ ನಿಧಿಗಾಗಿ ಮೀಸಲಿಟ್ಟಿರುವ ಅನುದಾನವನ್ನು 5 ಪಾಲಿಕೆಗಳಿಗೆ ತ್ವರಿತವಾಗಿ ಹಂಚಿಕೆ ಮಾಡುವಂತೆ ಕೂಡ ಮನವಿ ಮಾಡಲಾಯಿತು.
ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಎಸ್. ಸೋಮಶೇಖರ ಗಾಂಧಿ, ಉಪಾಧ್ಯಕ್ಷರಾದ ಡಾ. ಕೆ.ಎಸ್. ಸ್ವಾಮಿ ಹಾಗೂ ಹೆಚ್.ಎಚ್. ಪರಿಮಳ ಹೊಸ್ಮನೆ, ಕಾರ್ಯಕಾರಿಸಮಿತಿ ಸದಸ್ಯರಾದ ರಾಜಗಿರಿ ಪ್ರದೀಪ್, ಗಂಡಸಿ ಸದಾನಂದಸ್ವಾಮಿ, ಎನ್. ಶಿವಾನಂದ, ಸುಂದರೇಶ್, ಬಿ.ಪಿ. ನಟರಾಜ್ ಶ್ಯಾಮ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

0 Comments