ಹುಣಸೂರು : ರಸ್ತೆ ಬದಿ ಅರಣ್ಯ ಇಲಾಖೆ ಸಿಬ್ಬಂದಿಗಳು ಮಿಡ್ ನೈಟ್ ಪಾರ್ಟಿ ಮಾಡಿದ ಪ್ರಕರಣ ಬೆಳಕಿಗೆ ಬಂದಿದೆ.ಸಿಬ್ಬಂದಿಗಳ ಮೋಜುಮಸ್ತಿಯನ್ನ ಸೆರೆಹಿಡಿಯಲು ತೆರಳಿದ ಪತ್ರಕರ್ತನ ಮೇಲೆ ಹಲ್ಲೆ ನಡೆದಿದೆ.ಈ ಸಂಬಂಧ ಚಿಕಿತ್ಸೆ ಪಡೆದ ಪತ್ರಕರ್ತ ವಿಶಾಂತ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಬಿಳಿಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ನಿನ್ನೆ ತಡರಾತ್ರಿ ಹುಣಸೂರು ರಾಜ್ಯ ಹೆದ್ದಾರಿ ಮೂಡಲಕೊಪ್ಪಲು ಹಾಗೂ ಮಾದಳ್ಳಿ ಮಠದ ಮಾರ್ಗವಾಗಿ ಸಾಗುವ ಅರಣ್ಯ ವ್ಯಾಪ್ತಿಯ ರಸ್ತೆ ಬದಿ ಅರಣ್ಯ ಇಲಾಖೆ ಸಿಬ್ಬಂದಿಗಳು ಎಣ್ಣೆ ಪಾರ್ಟಿ ಮಾಡಿದ್ದಾರೆ.ಈ ಮಾಹಿತಿ ಅರಿತ ಸ್ಥಳೀಯ ಪತ್ರಕರ್ತ ವಿಶಾಂತ್ ದೃಶ್ಯ ಸೆರೆಹಿಡಿಯಲು ತೆರಳಿದ್ದಾರೆ.ಈ ವೇಳೆ ಪ್ರತಿರೋಧಿಸಿದ ಸಿಬ್ಬಂದಿಗಳು ವಾಗ್ವಾದ ನಡೆಸಿ ಹಲ್ಲೆ ಮಾಡಿ ಬಲವಂತವಾಗಿ ವಿಡಿಯೋ ಡಿಲೀಟ್ ಮಾಡಿಸಿದ್ದಾರೆ. ಎಣ್ಣೆ ಪಾರ್ಟಿ ಮಾಡುವ ವಿಡಿಯೋ ಆಕಸ್ಮಿಕವಾಗಿ ಮೊಬೈಲ್ ನಲ್ಲಿ ಉಳಿದುಕೊಂಡಿದೆ.ಹಲ್ಲೆಗೊಳಗಾದ ವಿಶಾಂತ್ ಆಸ್ಪತ್ರೆಯಲ್ಲಿ ಎಂಎಲ್ ಸಿ ಮಾಡಿಸಿ ಬಿಳಿಕೆರೆ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಅರಣ್ಯ ಇಲಾಖೆ ಸಿಬ್ಬಂದಿಗಳ ಗೂಂಡಾ ವರ್ತನೆ ಪ್ರಶ್ನಿಸುವವರೇ ಇಲ್ಲದಂತಾಗಿದೆ.ಅರಣ್ಯ ವ್ಯಾಪ್ತಿಯಲ್ಲಿ ಮಧ್ಯ ನಿಷೇಧವಿದೆ.ಹೀಗಿದ್ದೂ ಕಾನೂನು ಪಾಲಿಸಬೇಕಿರುವ ಸಿಬ್ಬಂದಿಗಳೇ ಬೇಲಿ ದಾಟಿದಂತೆ ವರ್ತಿಸಿದ್ದಾರೆ.ಹಿರಿಯ ಅಧಿಕಾರಿಗಳು ಇಂತಹ ಸಿಬ್ಬಂದಿಗಳ ವಿರುದ್ದ ಕ್ರಮ ಕೈಗೊಳ್ಳಬೇಕಿದೆ.

0 Comments