ಕಳಪೆ ರಸ್ತೆ ಕಾಮಗಾರಿ...ರೊಚ್ಚಿಗೆದ್ದ ಗ್ರಾಮಸ್ಥರು...ಅಧಿಕಾರಿಗಳ ವಿರುದ್ದ ಆಕ್ರೋಷ...



ಪಿರಿಯಾಪಟ್ಟಣ : ಕಳಪೆ ರಸ್ತೆ ಕಾಮಗಾರಿ ವಿರುದ್ದ ಗ್ರಾಮಸ್ಥರು ಆಕ್ರೋಷ ವ್ಯಕ್ತಪಡಿಸಿ ಅಧಿಕಾರಿಗಳ ವಿರುದ್ದ ಹಿಡಿಶಾಪ ಹಾಕಿದ ಘಟನೆ ಪಿರಿಯಾಪಟ್ಟಣ ತಾಲೂಕು ಕಣಗಾಲ್ ಗ್ರಾಮದಲ್ಲಿ ನಡೆದಿದೆ.ಹೆಸರಾಂತ ಚಿತ್ರನಿರ್ದೇಶಕ ಪುಟ್ಟಣ್ಣಕಣಗಾಲ್ ಹುಟ್ಟೂರಿನ ಗ್ರಾಮಸ್ಥರು ಅಧಿಕಾರಿಗಳ ವಿರುದ್ದ ಸಿಡಿದೆದ್ದಿದ್ದಾರೆ.ಕೂಡಲೇ ಕಾಮಗಾರಿ ಸ್ಥಗಿತಗೊಳಿಸಿ ಗುಣಮಟ್ಟದ ಕಾಮಗಾರಿ ನಡೆಸುವಂತೆ ಒತ್ತಾಯಿಸಿದ್ದಾರೆ.

ಕಣಗಾಲ್ ನಿಂದ ಕುಶಾಲನಗರಕ್ಕೆ ತೆರಳುವ ಮುಖ್ಯರಸ್ತೆಗೆ ಡಾಂಬರೀಕರಣ ನಡೆಯುತ್ತಿದೆ.ಕೋಟ್ಯಾಂತರ ವೆಚ್ಚದಲ್ಲಿ ರಸ್ತೆ ಅಭಿವೃದ್ದಿ ಕಾಮಗಾರಿ ಕೈಗೊಳ್ಳಲಾಗಿದೆ.ಡಾಂಬರೀಕರಣ ಗುಣಮಟ್ಡ ತೀರ ಕಳಪೆಯಾಗಿರುವುದನ್ನ ಗ್ರಾಮಸ್ಥರೇ ಬಹಿರಂಗಪಡಿಸಿದ್ದಾರೆ.ಕಾಲಿನಲ್ಲಿ ಕೆರೆದರೆ ಡಾಂಬರ್ ಕಿತ್ತುಬರುತ್ತಿದೆ.ಸಾರ್ವಜನಿಕರ ತೆರಿಗೆ ಹಣದಲ್ಲಿ ರಸ್ತೆ ಅಭಿವೃದ್ದಿ ಪಡಿಸುತ್ತಿರುವ ಅಧಿಕಾರಿಗಳು ಗುಣಮಟ್ಟ ಕಾಪಾಡುವುದರಲ್ಲಿ ನಿರ್ಲಕ್ಷ್ಯತೆ ತೋರಿರುವುದು ಗ್ರಾಮಸ್ಥರ ಆಕ್ರೋಷಕ್ಕೆ ಕಾರಣವಾಗಿದೆ.ಕಾಮಗಾರಿ ನಡೆಯುತ್ತಿರುವ ಸ್ಥಳದಲ್ಲಿ ಯಾವುದೇ ಅಧಿಕಾರಿ ಹಾಜರಿಲ್ಲ.ಕೇವಲ ಕೆಲಸಗಾರರು ಮಾತ್ರ ಕಾಮಗಾರಿಯಲ್ಲಿ ತೊಡಗಿದ್ದಾರೆ.ನಿಗದಿತ ಪ್ರಮಾಣದಲ್ಲಿ ಮಿಶ್ರಣ ಮಾಡದ ಡಾಂಬರ್ ಬಳಸಿರುವುದಾಗಿ ಗ್ರಾಮಸ್ಥರು ಆರೋಪಿಸಿದ್ದಾರೆ.ಕೂಡಲೇ ಅಧಿಕಾರಿಗಳು ಗುಣಮಟ್ಟಕ್ಕೆ ಆಧ್ಯತೆ ನೀಡದಿದ್ದಲ್ಲಿ ಕಾನೂನಾತ್ಮಕವಾಗಿ ಹೋರಾಟ ಕೈಗೊಳ್ಳುವ ಎಚ್ಚರಿಕೆ ನೀಡಿದ್ದಾರೆ...

 ವರದಿ ಮಸಿಂ ಶರೀಫ್

Post a Comment

0 Comments