ಈಶ್ವರ ದೇವಸ್ಥಾನದ ಆವರಣದಲ್ಲಿ ಸರ್ಪ ಪ್ರತ್ಯಕ್ಷ : ಭಕ್ತರಲ್ಲಿ ಆತಂಕ

ಈಶ್ವರ ದೇವಸ್ಥಾನದ ಆವರಣದಲ್ಲಿ ಸರ್ಪ ಪ್ರತ್ಯಕ್ಷ
: ಭಕ್ತರಲ್ಲಿ ಆತಂಕ

ಗದಗ : ಗದಗ ಜಿಲ್ಲೆಯ ಲಕ್ಕುಂಡಿಯಲ್ಲಿ ಇರುವ ಐತಿಹಾಸಿಕ ಈಶ್ವರ ದೇವಸ್ಥಾನದ ಆವರಣದಲ್ಲಿ ನಿಜಘಟಸರ್ಪ (ಹಾವು) ಪ್ರತ್ಯಕ್ಷಗೊಂಡ ಘಟನೆ ಭಕ್ತರಲ್ಲಿ ಆತಂಕ ಮೂಡಿಸಿದೆ.
ಲಕ್ಕುಂಡಿ ಚೌಕಿಮಠದ ಕುಟುಂಬದವರು ದೇವಸ್ಥಾನ ಆವರಣದಲ್ಲಿ ಸ್ವಚ್ಛತಾ ಕಾರ್ಯ ನಡೆಸುತ್ತಿರುವ ವೇಳೆ, ಅಚಾನಕ್‌ವಾಗಿ ಜಾವು ಕಾಣಿಸಿಕೊಂಡಿದೆ. ಸುಮಾರು 1.5 ಮಾರಿನಷ್ಟು ಉದ್ದವಿರುವ ಘಟಸರ್ಪ ಕಂಡು ಸ್ಥಳದಲ್ಲಿದ್ದ ಯುವಕರು ಬೆಚ್ಚಿಬಿದ್ದಿದ್ದಾರೆ.
ಘಟನೆಯ ದೃಶ್ಯವನ್ನು ಕೆಲ ಯುವಕರು ತಮ್ಮ ಮೊಬೈಲ್ ಫೋನ್‌ನಲ್ಲಿ ರೆಕಾರ್ಡ್ ಮಾಡಿಕೊಂಡಿದ್ದು, ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ದೇವಾಲಯದ ಆವರಣದಲ್ಲಿ ಅಪಾಯಕಾರಿ ಜಾವು ಕಾಣಿಸಿಕೊಂಡ ಕಾರಣ ಸ್ಥಳೀಯರು ಹಾಗೂ ಭಕ್ತರಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ.

ವರದಿ : ಮಂಜುನಾಥ್ ಮರಾಟೆ 

Post a Comment

0 Comments