ಬೇಲೂರು : ನರ್ಸರಿ ಪ್ರದೇಶದ ಪಿಲ್ಟರ್ ಹೌಸ್ ಹತ್ತಿರ ಇಂದು ಮಧ್ಯಾಹ್ನ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡು ವ್ಯಾಪಕ ಹಾನಿ ಉಂಟಾಗಿದೆ.
ಬೆಂಕಿ ತೀವ್ರವಾಗಿ ಹಬ್ಬಿದ ಪರಿಣಾಮ ನರ್ಸರಿಯಲ್ಲಿ ಬೆಳೆಸಲಾಗಿದ್ದ ಸಾವಿರಾರು ಅಲಂಕಾರಿಕ ಹಾಗೂ ಹಣ್ಣು ಗಿಡಗಳು ಭಸ್ಮವಾಗಿವೆ ಎಂದು ತಿಳಿದುಬಂದಿದೆ.
ಮಧ್ಯಾಹ್ನದ ವೇಳೆ ಪಿಲ್ಟರ್ ಹೌಸ್ ಹಿಂಭಾಗದ ಒಣಗಿದ ಹುಲ್ಲು ಮತ್ತು ಪ್ಲಾಸ್ಟಿಕ್ ಕವರ್‌ಗಳಿಗೆ ಬೆಂಕಿ ತಗುಲಿ, ಗಾಳಿ ವೇಗದಿಂದ ಜ್ವಾಲೆಗಳು ನರ್ಸರಿ ಭಾಗಕ್ಕೆ ವ್ಯಾಪಿಸಿದ್ದವು ಎನ್ನಲಾಗಿದೆ.
ಹೊಗೆ ದಟ್ಟವಾಗಿ ಆವರಿಸಿದ್ದರಿಂದ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿದ್ದು, ಸ್ಥಳೀಯರು ತಕ್ಷಣ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದಾರೆ.
ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ಸಿಬ್ಬಂದಿ ನೀರಿನ ಟ್ಯಾಂಕರ್ ಬಳಸಿ ಬೆಂಕಿಯನ್ನು ನಿಯಂತ್ರಣಕ್ಕೆ ತಂದಿದ್ದಾರೆ.
ಪ್ರಾಥಮಿಕ ಅಂದಾಜು ಪ್ರಕಾರ ಲಕ್ಷಾಂತರ ರೂಪಾಯಿ ಮೌಲ್ಯದ ಗಿಡಗಳು ಹಾನಿಗೊಳಗಾಗಿದ್ದು, ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಅಥವಾ ನಿರ್ಲಕ್ಷ್ಯ ಕಾರಣವಾಗಿರಬಹುದೆಂಬ ಶಂಕೆ ವ್ಯಕ್ತವಾಗಿದೆ.
ಘಟನೆಗೆ ಸಂಬಂಧಿಸಿ ತನಿಖೆ ಮುಂದುವರಿದಿದ್ದು, ಅವಘಡದಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.

0 Comments