ಧಾರವಾಡ : ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನ ಮೊರಬ ಗ್ರಾಮದ ಹೊರವಲಯದಲ್ಲಿ ಕಾರಿಗೆ ಚಕ್ಕಡಿ ಟಚ್ ಆಯ್ತು ಎನ್ನುವ ಸಣ್ಣ ವಿಚಾರವೇ ದೊಡ್ಡ ಗಲಾಟೆಗೆ ಕಾರಣವಾಗಿ ಮಾರಣಾಂತಿಕ ಹಲ್ಲೆಗೆ ತಿರುಗಿದೆ. ಮಾಜಿ ಜಿಲ್ಲಾ ಪಂಚಾಯತ್ ಉಪಾಧ್ಯಕ್ಷ ಶಿವಾನಂದ ಕರಿಗಾರ ಅವರ ಸಹೋದರ ಹನುಮಂತ ಕರಿಗಾರ ಮತ್ತು ಅವರ ತಂಡ ಬ್ಯಾಹಟ್ಟಿ ಮೂಲದ ಗ್ರಾಮ ಪಂಚಾಯತ್ ಅಧ್ಯಕ್ಷ ಸೋಮಶೇಖರ್ ಬೆಂಗೇರಿ, ಮಂಜುನಾಥ್ ಬಳ್ಳೋಳ್ಳಿ ಮತ್ತು ರಮೇಶ ಬೆಂಗೇರಿ ಮೇಲೆ ಹಲ್ಲೆ ನಡೆಸಿದ ಆರೋಪ ಕೇಳಿಬಂದಿದೆ.
ಹಲ್ಲೆ ಮಾಡಿದ ಆರೋಪಿ ಹನುಮಂತ ಕರಿಗಾರ
ಗಾಯಾಳುಗಳನ್ನು ತಕ್ಷಣ ಕಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಮುಂದುವರಿಸಲಾಗುತ್ತಿದೆ. ಪ್ರಕರಣ ಸಂಬಂಧ ಹನುಮಂತ ಕರಿಗಾರನನ್ನು ನವಲಗುಂದ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದು, ಇನ್ನುಳಿದ ಇಬ್ಬರು ಆರೋಪಿಗಳಿಗಾಗಿ ಹುಡುಕಾಟ ಮುಂದುವರಿಸಿದ್ದಾರೆ. ಘಟನಾ ಸ್ಥಳಕ್ಕೆ ಧಾರವಾಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಗುಂಜನ್ ಆರ್ಯ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ನವಲಗುಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
0 Comments